ಆರ್ಥಿಕತೆಯ ವೇಗದ ಜೊತೆಗೆ ಹೆಜ್ಜೆ ಹಾಕುತ್ತಾ

ವಿತ್ತೀಯ ಕ್ರಮಗಳು ಮುಂದಿನ ತ್ರೈಮಾಸಿಕಗಳಲ್ಲಿ ಅಭಿವೃದ್ಧಿಗೆ ಪೂರಕವಾಗಿರಬೇಕು

June 02, 2023 10:19 am | Updated 10:19 am IST

ರಾಷ್ಟ್ರೀಯ ಅಂಕಿಅಂಶಗಳ ಕಚೇರಿ (NSO) ನಡೆಸುವ 12 ತಿಂಗಳುಗಳ ರಾಷ್ಟ್ರೀಯ ವರಮಾನದ ತಾತ್ಕಾಲಿಕ ಅಂದಾಜು ಮಾರ್ಚ್‌ನಲ್ಲಿ ಕೊನೆಗೊಂಡಿದೆ ಮತ್ತು ನಾಲ್ಕನೇ ತ್ರೈಮಾಸಿಕದ ಜಿಡಿಪಿ ಅಂದಾಜು ಕಳೆದ ವರ್ಷದ ಬಿರುಗಾಳಿಯ ಹೊರತಾಗಿಯೂ ವೇಗವನ್ನು ಉಳಿಸಿಕೊಂಡಿರುವ ಆರ್ಥಿಕತೆಯ ಚಿತ್ರಣವನ್ನು ಕಟ್ಟಿಕೊಡುತ್ತದೆ. ಒಟ್ಟು ರಾಷ್ಟ್ರೀಯ ಉತ್ಪನ್ನ (GDP) ಜನವರಿ-ಮಾರ್ಚ್ ಮಧ್ಯದ ತ್ರೈಮಾಸಿಕದಲ್ಲಿ ಶೇ.6.1ರಷ್ಟು ವಿಸ್ತರಣೆಯಾಗಿದ್ದು, ಇಡೀ ವರ್ಷದ ಬೆಳವಣಿಗೆಯ ದರ ಶೇ.7.1ರ ವೇಗದಲ್ಲಿ ಅಂದಾಜಿಸಿದ್ದಕ್ಕೂ ತುಸು ಹೆಚ್ಚಿನ ದರದಲ್ಲಿ ಅಭಿವೃದ್ಧಿಗೆ ಸಹಕರಿಸಿದೆ. ಒಟ್ಟು ಮೊತ್ತ ನಾಲ್ಕನೇ ತ್ರೈಮಾಸಿಕದ ಸಂಖ್ಯೆಗಳಿಗೆ ಕೂಡಿಕೊಂಡು, ವಿಶಾಲ ತಳಹದಿಯಲ್ಲಿ ಹಿಂದಿನ ಮೂರು ತಿಂಗಳಲ್ಲಿ ಅಭಿವೃದ್ಧಿ ಮೇಲ್ಮನೆಯಲ್ಲಿ ಇರುವುದು ಕಾಣಿಸುತ್ತದೆ; ಇದಕ್ಕೆ ಅಪವಾದವೆಂಬಂತೆ, ಒಂದು ಛತ್ರಿಯಡಿ ಬರುವ ಬಳಕೆಯ ಸೇವಾ ಕ್ಷೇತ್ರ (ವಿದ್ಯುತ್, ಗ್ಯಾಸ್ ಮತ್ತು ನೀರು ಸರಬರಾಜು ಒಳಗೊಂಡಂತೆ) ಮತ್ತು ವ್ಯಾಪಾರ, ಹೋಟೆಲ್‌ಗಳು, ಸಾರಿಗೆ, ಸಂಪರ್ಕ ಮತ್ತು ಪ್ರಸಾರಗಳನ್ನೊಳಗೊಂದ ಸಂಯುಕ್ತ ಸೇವಾ ವಿಭಾಗ - ಎಂಟು ಜಿವಿಎ ಕ್ಷೇತ್ರಗಳಲ್ಲಿ - ಈ ಎರಡು ಕ್ಷೇತ್ರಗಳು ವಿಸ್ತರಣೆಯಲ್ಲಿ ಹಿಂದೆಬಿದ್ದಿವೆ. ನಿರ್ಮಾಣ ಕ್ಷೇತ್ರ ಮತ್ತು ಅದಕ್ಕೆ ಹೊಂದಿಕೊಂಡ ಹಲವು ವಲಯಗಳು ಅಭಿವೃದ್ಧಿಯ ಮುಂದಾಳತ್ವದಲ್ಲಿದ್ದು, 10.4% ವಿಸ್ತರಣೆಯಾಗಿದೆ;  ಒಟ್ಟಾರೆಯಾಗಿ ಸೇವಾಕ್ಷೇತ್ರಗಳು ಒಟ್ಟು ಮೌಲ್ಯದ ಕೂಡಿಕೆಯನ್ನು (GVA) ಹೆಚ್ಚಿಸಿದ್ದು, ಹೋಟೆಲ್ ಮತ್ತು ಸಾರಿಗೆ 9.1% ಬೆಳವಣಿಗೆಯನ್ನು ಕಂಡಿವೆ; ಇದು ಮೂರನೇ ತ್ರೈಮಾಸಿಕದ 9.6% ವೇಗದ ಹಿಂಜರಿಕೆಯ ಹೊರತಾಗಿಯೂ ಆಗಿರುವಂತದ್ದು. ಕೋವಿಡ್-19ರ ಭಯ ಕಡಿಮೆಯಾಗುತ್ತಿದ್ದಂತೆ ಪ್ರಯಾಣ ಕ್ಷೇತ್ರದಲ್ಲಿ ಮತ್ತೆ ಬೇಡಿಕೆ ಬಂದಿರುವುದರಿಂದ, ಜಿವಿಎಯಲ್ಲಿ ಅತಿ ಹೆಚ್ಚು ಪಾಲಿರುವ ಕ್ಷೇತ್ರವಾಗಿ 13.1%ನಷ್ಟು ಬೆಳೆದಿದೆ. ಉತ್ಪಾದನೆಯ ಕ್ಷೇತ್ರವೂ ಆಶಾದಾಯಕವಾಗಿದ್ದು, ಡಿಸೆಂಬರ್ ತ್ರೈಮಾಸಿಕದ ಕುಗ್ಗುವಿಕೆಯಿಂದ ಚೇತರಿಸಿಕೊಂಡು 4.5% ವಿಸ್ತರಣೆಯನ್ನು ಕಂಡಿದೆ. ಹೀಗಾಗಿ, ಮೂರನೇ ತ್ರೈಮಾಸಿಕದಿಂದ ಉತ್ಪಾದನೆಯ ಜಿವಿಎ 20.4%ನಷ್ಟು ತ್ವರಿತ ಏರಿಕೆ ಕಂಡಿದ್ದು, ಇತ್ತೀಚಿನ ತಿಂಗಳುಗಳಲ್ಲಿ ಎಸ್&ಪಿ ಜಾಗತಿಕ ಸರ್ವೆ ನಡೆಸಿದ ಕೊಳ್ಳುವ ನಿರ್ವಹಣೆಯ ಸೂಚಿ (PMI) ವರದಿ ಮಾಡಿದಂತೆ ಸುಸ್ಥಿರ ಬೆಳವಣಿಗೆಯನ್ನು ಪ್ರತಿಫಲಿಸುತ್ತದೆ.

ಅಲ್ಲದೆ, ಇತ್ತೀಚಿನ ಪಿಎಂಐ ಸೂಚಿಯ ಪ್ರಕಾರ, ಮೇ ತಿಂಗಳಲ್ಲಿ ಕಾರ್ಖಾನೆಗಳ ಬೇಡಿಕೆಗಳು ಏರಿಕೆ ಕಂಡಿದ್ದು ಜನವರಿ 2021ರಿಂದ ಇದು ವೇಗದ ಬೆಳವಣಿಗೆಯ ಸಮಯವಾಗಿದೆ; ಇದು ಸ್ವಾಗತಾರ್ಹ ಸಂಕೇತ. ಹಣಕಾಸು ಕ್ಷೇತ್ರದಲ್ಲಿ ಗಣನೀಯವಾಗಿ ಹೆಚ್ಚಿರುವ ಅಪಾಯದ ಮುನ್ಸೂಚನೆ ಹಾಗೂ ಜಾಗತಿಕ ಆರ್ಥಿಕ ಹಿಂಜರಿತದಿಂದ ಹೆಚ್ಚಿರುವ ಅನಿಶ್ಚಿತತೆಯ ಕಾರಣಗಳಿಂದ ಈ ವರ್ಷ ನಮ್ಮ ಆರ್ಥಿಕತೆ ಎದುರಿಸಲಿರುವ ಬಿರುಗಾಳಿಗೆ ಸನ್ನದ್ಧವಾಗಲು ಇದು ಸಹಕರಿಸಲಿದೆ. ಎನ್‍ಎಸ್‌ಒ ಅಂಕಿಅಂಶಗಳು ಸೂಚಿಸಿರುವ ಮತ್ತೊಂದು ಸಂಗತಿಯೇನೆಂದರೆ ನಾಲ್ಕನೇ ತ್ರೈಮಾಸಿಕದಲ್ಲಿ ಬಲ ಪಡೆದುಕೊಂಡಿರುವ ಹೂಡಿಕೆ ಚಟುವಟಿಕೆಗಳಿಗೆ ಪ್ರಾಕ್ಸಿಯಾಗಿರುವ ನಿಶ್ಚಿತ ಒಟ್ಟು ಬಂಡವಾಳದ (ಜಿಎಫ್‌ಸಿಎಫ್- ಗ್ರಾಸ್ ಫಿಕ್ಸೆಡ್ ಕ್ಯಾಪಿಟಲ್ ಫಾರ್ಮೇಷನ್) ಬಗ್ಗೆ; ವರ್ಷದಿಂದ ವರ್ಷಕ್ಕೆ ಜಿಎಫ್‌ಸಿಎಫ್ 8.9%ಗೆ ವಿಸ್ತರಣೆಯಾಗಿದೆ ಮತ್ತು ಸರ್ಕಾರ ಮೂಲ ಸೌಕರ್ಯ ಹಾಗೂ ಇತರ ಸಾರ್ವಜನಿಕ ಕ್ಷೇತ್ರಗಳಲ್ಲಿ ಬಂಡವಾಳ ಹೆಚ್ಚಿಸಿರುವುದರಿಂದ ನಿರಂತರ 20.8‍% ಬೆಳವಣಿಗೆ ಸಾಧ್ಯವಿದೆ. ಗುಣಾಕಾರದ ಬೆಳವಣಿಗೆಯ ಪರಿಣಾಮ ಮತ್ತು ಉದ್ಯೋಗ ನಿರ್ಮಾಣದಲ್ಲಿರುವ ಸಾಮರ್ಥ್ಯ, ಹೂಡಿಕೆ ಖರ್ಚುಗಳಲ್ಲಿ ಆಗಿರುವ ಸುಧಾರಣೆಗಳನ್ನು ಪರಿಗಣಿಸಿದರೆ ಈ ವರ್ಷದ ಮುನ್ನೋಟ ಆಶಾದಾಯಕವಾಗಿದೆ. ಇದಿನ್ನೂ ಖಚಿತವಾಗಬೇಕಾದರೆ, ಇದೇ ಜಿಡಿಪಿ ಅಂಕಿಅಂಶಗಳು, ಬೇಡಿಕೆಯ ಮುಖ್ಯ ಅಂಶವಾದ ಖಾಸಗಿ ಬಳಕೆಯ ಖರ್ಚುಗಳು ಇನ್ನೂ ಗಟ್ಟಿ ನೆಲೆ ಕಂಡುಕೊಳ್ಳಬೇಕು ಎಂಬ ಅಂಶದ ಬಗ್ಗೆ ಒತ್ತುನೀಡುತ್ತವೆ. ಮಾರ್ಚ್ ತ್ರೈಮಾಸಿಕದ ಕಳೆದ ಸಮಯದಿಂದ ಖಾಸಗಿ ಬಳಕೆಯ ಖರ್ಚು 3.2%ನಷ್ಟು ಕುಗ್ಗಿದೆ ಎಂದು ಅಂದಾಜಿಸಲಾಗಿದೆ; ಇದರ ಜಿಡಿಪಿಯ ಪಾಲು ಕಳೆದ ಎಂಟು ತ್ರೈಮಾಸಿಕಗಳಿಗೆ ಹೋಲಿಸಿದರೆ ಕಡಿಮೆಯಾಗಿದ್ದು 55%ಗೆ ಇಳಿದಿದೆ. ಮಳೆ ಕೊರತೆಯ ಸಾಧ್ಯತೆ ಹೆಚ್ಚಿದ್ದು ಮತ್ತು ಎಲ್ ನೀನೋ ಚಂಡಮಾರುತ ಬಹುತೇಕ ನಿಶ್ಚಿತವಾಗಿದ್ದು, ಕೃಷಿ ಉತ್ಪನ್ನ ಮತ್ತು ಅದಕ್ಕೆ ಸಂಬಂಧಿಸಿದ ಗ್ರಾಮೀಣ ಖರ್ಚು ಸಂಗತಿಗಳ ಮೇಲೂ ಮೋಡ ಕವಿದಿದೆ. ಆದುದರಿಂದ ನೀತಿನಿರೂಪಕರ ವಿತ್ತೀಯ ಕ್ರಮಗಳು ಮುಂದಿನ ತ್ರೈಮಾಸಿಕಗಳಲ್ಲಿ ಅಭಿವೃದ್ದಿಗೆ ಪೂರಕವಾಗಿರಬೇಕು.

Top News Today

Comments

Comments have to be in English, and in full sentences. They cannot be abusive or personal. Please abide by our community guidelines for posting your comments.

We have migrated to a new commenting platform. If you are already a registered user of The Hindu and logged in, you may continue to engage with our articles. If you do not have an account please register and login to post comments. Users can access their older comments by logging into their accounts on Vuukle.