ಬದಲಾಯಿಸುವ ಸಮಯ

ಸದ್ಯದ ಆದಾಯ ಅಂಕಿಅಂಶಗಳ ಪಥ ಜಿಎಸ್‌‍ಟಿ ಲೋಪದೋಷಗಳನ್ನು ಸರಿಪಡಿಸುವ ಅವಕಾಶವನ್ನು ಒದಗಿಸಿದೆ

June 03, 2023 11:17 am | Updated 02:15 pm IST

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌‍ಟಿ)ಯ ಒಟ್ಟು ಆದಾಯ ಮೇ ತಿಂಗಳಲ್ಲಿ 11.5% ಬೆಳವಣಿಗೆ ಕಂಡಿದ್ದು 1.57 ಲಕ್ಷ ಕೋಟಿ ರುಪಾಯಿಯನ್ನು ದಾಟಿದೆ. ಆರು ತಿಂಗಳುಗಳಲ್ಲಿ ಇದು ನಿಧಾನಗತಿಯ ಬೆಳವಣಿಗೆಯನ್ನು ಸೂಚಿಸಿದ್ದು, ಏಪ್ರಿಲ್‌ನ ಒಳಹರಿವಿಗೆ ಹೋಲಿಸಿದರೆ ಸಂಗ್ರಹ 16% ಕಡಿಮೆಯಾಗಿದ್ದರೂ, ಇದರ ಬಗ್ಗೆ ಸೂಕ್ಷ್ಮ ವಿಶ್ಲೇಷಣೆಯ ಅಗತ್ಯವಿದೆ. ಏಪ್ರಿಲ್ ಆದಾಯ ದಾಖಲೆ 1.87 ಲಕ್ಷ ಕೋಟಿ ರುಪಾಯಿ ಸಂಗ್ರಹವನ್ನು ದಾಟಿದ್ದರೂ, ವಿತ್ತೀಯ ವರ್ಷ ಅಂತ್ಯಗೊಳ್ಳುವಾಗ ನಿಯಮಗಳ ಅನುಸರಣೆಗೆ ಸಂಬಂಧಿಸಿ ಆದಂತಹ ಹೆಚ್ಚಳವದು. ಮೇ ತಿಂಗಳ ಸಂಗ್ರಹ, ಈ ವಿತ್ತೀಯ ವರ್ಷದ ಮೊದಲ ತಿಂಗಳಿನ ಏಪ್ರಿಲ್ ವಹಿವಾಟಿನದ್ದಾದರೂ, ಅದು ಮೂರು ತಿಂಗಳಿನಲ್ಲಿ ಅತ್ಯಂತ ಕಡಿಮೆ ಸಂಗ್ರಹವಾಗಿತ್ತು; ಇದು ಧನಾತ್ಮಕ ಪ್ರವೃತ್ತಿಯನ್ನು ಸೂಚಿಸುತ್ತದೆ. ಕಳೆದ 15 ತಿಂಗಳುಗಳಿಂದ ಜಿಎಸ್‌ಟಿ ಆದಾಯ 1.4 ಲಕ್ಷ ಕೋಟಿ ರೂ ದಾಟಿರುವುದು ನಿರಂತರವಾಗಿದ್ದು, ಮೇ ತಿಂಗಳಲ್ಲಿ 1.5 ಲಕ್ಷ ಕೋಟಿ ರೂ ದಾಟಿರುವುದು ಆರನೇ ಬಾರಿಯ ಸಾಧನೆಯಾಗಿದೆ. 2023ರಲ್ಲಿ ನಾಲ್ಕು ಬಾರಿ ಇದು ಸಾಧ್ಯವಾಗಿದೆ. ಏಪ್ರಿಲ್‌ನ ಸಾಮಾನ್ಯ ಹೆಚ್ಚಳವನ್ನು ಪಕ್ಕಕ್ಕಿಟ್ಟು ನೋಡಿದರೂ, ಅಕ್ಟೋಬರ್ 2022 ಮತ್ತು ಮೇ 2023ರ ನಡುವಿನ ಸರಾಸರಿ ತಿಂಗಳ ಆದಾಯ 1.53 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿದೆ (ಮತ್ತು ಏಪ್ರಿಲ್‌ನ ದಾಖಲೆ ಸಂಗ್ರಹ ಸೇರಿಸಿದರೆ 1.57 ಲಕ್ಷ ಕೋಟಿ ರೂ) ಎಂಬ ಅಂಶ ಇನ್ನೂ ಮುಖ್ಯವಾದದ್ದು. ಚಿಲ್ಲರೆ ಹಣದುಬ್ಬರ ಏಪ್ರಿಲ್‌ನಲ್ಲಿ 4.7%ಗೆ ಇಳಿದಿದ್ದರೂ ಮತ್ತು ಸಗಟು ದರಗಳು ಹಿಂಜರಿತದತ್ತ ಜಾರುತ್ತಿದ್ದರೂ ಆದಾಯಗಳು ಸ್ಥಿರವಾಗಿವೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಬೆಲೆ ಏರಿಕೆ ಕಡಿಮೆಯಾದರೆ ಜಿಎಸ್‍ಟಿ ಬೆಳವಣಿಗೆ ದರದ ಅಂದಾಜು 10%-12%, ಕಳೆದ ವರ್ಷಕ್ಕಿಂತ ತುಸು ಗಂಭೀರ ಎನಿಸಿಕೊಂಡರೂ ಸಾಧ್ಯವಾಗಬಹುದು.

ಮೇ ತಿಂಗಳ ಆರ್ಥಿಕ ಚಟುವಟಿಕೆಯ ದತ್ತಾಂಶ, ಆರ್ಥಿಕತೆ ವೇಗ ಪಡೆಯುತ್ತಿರುವುದನ್ನು ಸೂಚಿಸುತ್ತದೆ. ಬೇರೆ ವಲಯಗಳಲ್ಲಿ ತುಸು ಹಿಂದೆಬಿದ್ದಿದ್ದರೂ ಎಸ್&ಪಿ ಜಾಗತಿಕ ಕೊಳ್ಳುವ ನಿರ್ವಹಣೆ ಸೂಚಿ (PMI)ಯ ಪ್ರಕಾರ ಅಕ್ಟೋಬರ್ 2020ರಿಂದ ನೋಡಿದಾಗ ಉತ್ಪಾದಕರಿಗೆ ಮೇ ಅತ್ಯುತ್ತಮ ತಿಂಗಳಾಗಿದ್ದು, ಎರಡು ಅನಿಶ್ಚಿತ ತಿಂಗಳುಗಳ ನಂತರ ಇಂಧನ ಬೆಲೆಗಳು ಮತ್ತೆ ಪುಟಿದೆದ್ದಿದ್ದು, ಮತ್ತು ವಾಹನಗಳ ಸಗಟು ಮಾರಾಟ ಹೆಚ್ಚಳಗೊಳ್ಳುತ್ತಿರುವುದನ್ನು ಸೂಚಿಸುತ್ತದೆ. ಬೇರೆ ನಿಯಮಗಳ ಅನುಸರಣೆಯ ಜೊತೆಗೆ, ಬಳಕೆಯ ಮಾಪನದಿಂದ ಕೂಡ ಮುಂದಿನ ತಿಂಗಳುಗಳಲ್ಲಿ ಆದಾಯ ಹೆಚ್ಚಲಿದೆ. ಈ ಜುಲೈ ಹೊತ್ತಿಗೆ ಜಿಎಸ್‌ಟಿ ಆರು ವರ್ಷ ಪೂರೈಸುತ್ತದೆ, ಈ ಸಂದರ್ಭದಲ್ಲಿ ನಕಲಿ ನೊಂದಣಿ ಮತ್ತು ತೆರಿಗೆ ವಂಚನೆಗಳನ್ನು ಪತ್ತೆಹಚ್ಚಿ ಕ್ರಮ ತೆಗೆದುಕೊಳ್ಳಲು ಕಂದಾಯ ಇಲಾಖೆ ಎರಡು ತಿಂಗಳ ಅಭಿಯಾನವನ್ನು ಪ್ರಾರಂಭಿಸುತ್ತಿದೆ. ಹೊಸ ಕಣ್ಗಾವಲು ವ್ಯವಸ್ಥೆ ಹಿಂದಿರುಗಿರುವುದು ಹೆಚ್ಚಿನ ಆದಾಯ ಉಳ್ಳ ಪ್ರಕರಣಗಳನ್ನು ಆದ್ಯತೆ ಮಾಡಿಕೊಳ್ಳುವತ್ತ ದಾಪುಗಾಲಿಟ್ಟಿದೆ. ಆಗಸ್ಟ್‌ನಿಂದ 5ಕೋಟಿ ರೂಗೂ ಹೆಚ್ಚು ವಹಿವಾಟಿರುವ ಸಂಸ್ಥೆಗಳಿಗೆ ಇ-ಬಿಲ್‌ಗಳನ್ನು ನೀಡುವುದು ಕಡ್ಡಾಯವಾಗಿದ್ದು, ತೆರಿಗೆ ಪಥದಲ್ಲಿ ಕೆಲವು ಸಮಸ್ಯೆಗಳನ್ನು ನಿವಾರಿಸುವ ಸಾಧ್ಯತೆಯಿದೆ. 2000 ರೂ ನೋಟುಗಳನ್ನು ಸಂಗ್ರಹಿಸಿಟ್ಟುಕೊಂಡಿರುವವರು ಅದನ್ನು ಸೆಪ್ಟಂಬರ್ 30ರೊಳಗೆ ಖರ್ಚು ಮಾಡಲು ನೋಡುತ್ತಿರುವುದರಿಂದ ಅದು ಕೂಡ ಒಂದು ಮಟ್ಟದ ಉತ್ತೇಜನ ನೀಡಲಿದೆ. ಇನ್ನುಮುಂದೆ ಪ್ರತಿ ತಿಂಗಳ ಜಿಎಸ್‌ಟಿ ಆದಾಯ 1.55 ಲಕ್ಷ ಕೋಟಿ ರೂ ಸಾಮಾನ್ಯವಾಗುವುದಾದರೆ, ತೆರಿಗೆಯನ್ನು ಕಾಡುವ ನೀತಿನಿರೂಪಣೆಯ ಹಂತದ ಲೋಪದೋಷಗಳಿಗೆ ಪರಿಣಾಮಕಾರಿ ತೀರ್ಮಾನ ನೀಡುವುದಕ್ಕೆ ಈ ಅವಕಾಶವನ್ನು ಬಳಸಿಕೊಳ್ಳಬೇಕು. ಮುಂದೆ ಲೋಕಸಭಾ ಚುನಾವಣೆಗಳಿದ್ದು ರಾಜಕೀಯ ತೀರ್ಮಾನಗಳಿಗೆ ಅವಕಾಶ ಬಹಳ ಸಂಕುಚಿತವಾಗಿದ್ದರೂ, ಟ್ರಿಬ್ಯುನಲ್‌ಗಳನ್ನು ಸ್ಥಾಪಿಸುವುದು, ಆಟಗಳು ಮತ್ತು ಕೆಸಿನೋಗಳಿಗೆ ನೀಡಿರುವ ಲೆವಿಗಳ ಬಗ್ಗೆ ಸ್ಪಷ್ಟನೆ, ತೆರಿಗೆ ದರ ವ್ಯವಸ್ಥೆಯ ಗಾತ್ರವನ್ನು ಸರಿಪಡಿಸುವುದಕ್ಕೆ ನೀಲಿನಕ್ಷೆ ಹಾಕಿಕೊಳ್ಳುವಂತಹ ಮುಂದಿನ ಕೆಲವೇ ದಿನಗಳಲ್ಲಿ ಮಾಡಬಹುದಾದ ಕೆಲಸಗಳ ಬಗ್ಗೆ ಜಿಎಸ್‌ಟಿ ಕೌನ್ಸಿಲ್ ಅನಿಶ್ಚಿತತೆ ತಳೆಯಬಾರದು.

Top News Today

Comments

Comments have to be in English, and in full sentences. They cannot be abusive or personal. Please abide by our community guidelines for posting your comments.

We have migrated to a new commenting platform. If you are already a registered user of The Hindu and logged in, you may continue to engage with our articles. If you do not have an account please register and login to post comments. Users can access their older comments by logging into their accounts on Vuukle.